letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de mula mula - haricharan

Loading...

ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ

ಲವ್ ವೈರಸ್ಸು ಎಂಟ್ರಾಗೈತೆ
ಲೈಫ್ ಸಿಸ್ಟಮ್ಮು ಹ್ಯಾಂಗ್ ಆಗೈತೆ
ಮನಸ್ಯಾಕೋ ಕ್ರ್ಯಾಶ್ ಆಗಿ ಹೊಗೈತೆ
ಅಯ್ಯೋ ವೋಲ್ಟೇಜು ಹೆಚ್ಚಾಯ್ತು
ಪ್ರಾಯದ ಫ್ಯೂಸೆ ಹೊಯ್ತು
ನನ್ನ ಎದೆಗ್ಯಾಕೋ ಕನ್ನ ಬಿದ್ದು
100ಗೆ ಪೋನು ಹೋಯ್ತು
ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು
ಏ ಕಣ್ಣೀರಿನ ಫೈರ್ ಇಂಜಿನ್ನು ಆರ್ಸೋಕಂತ ಬಂತು
ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ
ಅವಳ ಕನಸು ಕಾಡಿದೆ ನನ್ನ, ನಿದಿರೆಗವಳ ನಗುವಿನ ಗುನ್ನ
ಆಗೋದೆಂಗೆ ನೋವಿನ ಈ ಸಾಲ ಮನ್ನಾ
ಈ ಹುಡುಗಿ ಪಡುಕೊಂಡವಳೇ ನನ್ನ ಕೊಲ್ಲೋ ಕಾಂಟ್ರಾಕ್ಟ್ ಅನ್ನ
ಇವಳ ಮೇಲೆ ಹಾಕ್ಲೇ ಬೇಕು fir ಅನ್ನ
ಸಾಯೋಕಂತು ಆಸೆಯಿಲ್ಲ
ಆದ್ರೂ ಸತ್ತಂಗ್ ಆಯ್ತೈತಲ್ಲ
ನಾಡಿ ಮಿಡಿತ ಕಣಿ ಹೇಳ್ತೈತಲ್ಲ
ತಂದಾನ ತಂದಾನ ಅಂದು ಖುಷಿ ಖುಷಿ ಆಯ್ತಲ್ಲ
ಏನೋ ತಿಳಿದಿಲ್ಲ ಯಾಕೆ ಏನೋ ಏನೇನೋ
ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ
ಏನಾಯ್ತೋ ಏನಾಯ್ತೋ ನಂಗೆ ಇಂಗ್ಯಾಕಾಯ್ತೋ
ಲವ್ ಆಯ್ತೋ ನೋವ್ ಆಯ್ತೋ ನಿ ಹೇಳು
ನಿ ಇರುವಾಗ ನಗುವ ನಾನು
ಹೋದಾಗ ಯಾತಕೋ ಪೇಯ್ನು
ಪೇಯ್ನ್ಯಾಕೋ ವೈನ್ ಆಗೈತೆ ಕೇಳು
ಅಯ್ಯೋ ವೋಲ್ಟೇಜು ಹೆಚ್ಚಾಯ್ತು
ಪ್ರಾಯದ ಫ್ಯೂಸೆ ಹೊಯ್ತು
ನನ್ನ ಎದೆಗ್ಯಾಕೋ ಕನ್ನ ಬಿದ್ದು
100ಗೆ ಪೋನು ಹೋಯ್ತು
ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು
ಏ ಕಣ್ಣೀರಿನ ಫೈರ್ ಇಂಜಿನ್ನು ಆರ್ಸೋಕಂತ ಬಂತು
ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ
ಲವ್ ವೈರಸ್ಸು ಎಂಟ್ರಾಗೈತೆ
ಲೈಫ್ ಸಿಸ್ಟಮ್ಮು ಹ್ಯಾಂಗ್ ಆಗೈತೆ
ಮನಸ್ಯಾಕೋ ಕ್ರ್ಯಾಶ್ ಆಗಿ ಹೊಗೈತೆ.

letras aleatórias

MAIS ACESSADOS

Loading...