letras.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

letra de sariyaagi - armaan malik

Loading...

ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗೂ, ನಿನದೇ ಮೆರವಣಿಗೆ
ಕನಸಿನ ಕುಲುಮೆಗೆ, ಉಸಿರನೂ ಊದುತ

ಕಿಡಿ ಹಾರುವುದು ಇನ್ನು ಖಚಿತ
ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

ಕಣ್ಣಲ್ಲೇ ಇದೆ, ಎಲ್ಲ ಕಾಗದ
ನೀನೆ ನನ್ನಯ ಅಂಛೆ ಪೆಟ್ಟಿಗೆ
ಏನೆ ಕಂಡರೂ ನೀನೆ ಜ್ಞಾಪಕ
ನೀನೆ ಔಷಧಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೆ ಅನ್ಯಾಯ
ನನ್ನಯ ನಡೆನುಡಿ ನಿನ್ನನೇ ಬಯಸುತ
ಬದಲಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

ನಿನ್ನ ನೃತ್ಯಕೆ ಸಿದ್ಧವಾಗಿದೆ
ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ
ಸುದ್ಧಿ ಇಲ್ಲದ ಸುದ್ಧಿಪತ್ರಿಕೆ
ಸೀರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ, ಇರುಳನು ಕಳೆಯುತ
ಬೆಳಗಾಗುವುದು ಇನ್ನು ಖಚಿತ

ಸರಿಯಾಗಿ ನೆನಪಿದೆ ನನಗೆ, ಇದಕೆಲ್ಲ ಕಾರಣ ಕಿರುನಗೆ

letras aleatórias

MAIS ACESSADOS

Loading...